ಸೋಮವಾರ, ಫೆಬ್ರವರಿ 2, 2026

Janaspandhan News

Home Blog

“5 ವರ್ಷಗಳ ನಂತರ ಮಾಲಿಕನನ್ನು ಕಂಡ ನಾಯಿ” ಮಾಡಿದ್ದೇನು ಗೊತ್ತಾ? ವಿಡಿಯೋ ನೋಡಿ.

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ನಾಯಿ ಮತ್ತು ಮಾನವನ ನಡುವಿನ ಸಂಬಂಧವು ಮಾತಿನಲ್ಲಿ ವಿವರಿಸಲು ಅಸಾಧ್ಯವಾದಷ್ಟು ಆಳವಾದದ್ದು. ಒಂದು ತುಣುಕು ಪ್ರೀತಿ, ಸ್ವಲ್ಪ ಕಾಳಜಿ ತೋರಿಸಿದರೂ ಸಾಕು – ನಾಯಿ ಅದನ್ನು ಜೀವಮಾನಪೂರ್ತಿ ನೆನಪಿಟ್ಟುಕೊಳ್ಳುತ್ತದೆ ಎಂಬುದಕ್ಕೆ ಮತ್ತೊಮ್ಮೆ ಸಾಕ್ಷಿಯಾದ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಚಿರಾಗ್ ಹವೇಲಿಯಾ ಎಂಬ ಯುವಕ ಹಂಚಿಕೊಂಡಿರುವ ಈ ಭಾವುಕ ವಿಡಿಯೋ ಈಗಾಗಲೇ ಲಕ್ಷಾಂತರ ಜನರ ಮನಸ್ಸುಗಳನ್ನು ಗೆದ್ದುಕೊಂಡಿದೆ. ಐದು ವರ್ಷಗಳ ಹಿಂದೆ ಸಾಕಿದ್ದ ಬೀದಿ ನಾಯಿಯೊಂದನ್ನು ಮತ್ತೆ ಭೇಟಿಯಾದ ಕ್ಷಣದ ದೃಶ್ಯವನ್ನು ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ನೋಡುಗರ ಕಣ್ಣಲ್ಲಿ ನೀರು ತರಿಸಿದೆ.

5 ವರ್ಷಗಳ ಬಳಿಕ ಮತ್ತೆ ಕಂಡುಬಂದ ಹಳೆಯ ಗೆಳತಿ ‘ಲಿಲ್ಲಿ’ :

ಚಿರಾಗ್ ಅವರು ಹಲವು ವರ್ಷಗಳ ಹಿಂದೆ ಫುಡ್ ಟ್ರಕ್ ನಡೆಸುತ್ತಿದ್ದ ವೇಳೆ ಒಂದು ಬೀದಿ ನಾಯಿ ಮರಿಯನ್ನು ನೋಡಿಕೊಂಡಿದ್ದರು. ಆ ನಾಯಿ ‘ಲಿಲ್ಲಿ’ ಎಂದು ಕರೆಯಲ್ಪಡುತ್ತಿತ್ತು. ದಿನೇ ದಿನೇ ಅವರಿಬ್ಬರ ನಡುವೆ ಒಡನಾಟ ಬೆಳೆದಿತ್ತು.

ಈ ವೈರಲ್‌ ಸುದ್ದಿನೂ ಓದಿ : ಆಟಿಕೆ ಗನ್‌ನಿಂದ ಶೂಟ್ ಮಾಡಿದ ಪುಟಾಣಿ; ದಪ್ಪೆಂದು ಬಿದ್ದ ಮರಿಯಾನೆ, ವಿಡಿಯೋ ವೈರಲ್

ಆದರೆ ಅನಿವಾರ್ಯ ಕಾರಣಗಳಿಂದಾಗಿ ಅಂಗಡಿ ಮುಚ್ಚಬೇಕಾದ ಸ್ಥಿತಿ ಬಂದಾಗ ಲಿಲ್ಲಿಯನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಲು ಸಾಧ್ಯವಾಗಿರಲಿಲ್ಲ.

“ಆ ದಿನ ನನ್ನ ಹೃದಯವೇ ಮುರಿದಿತ್ತು. ಆದರೆ ಆ ಬೀದಿಯಲ್ಲಿ ಜನರು ಅವಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂಬ ನಂಬಿಕೆ ನನಗಿತ್ತು” ಎಂದು ಚಿರಾಗ್ ಹೇಳಿದ್ದಾರೆ.

ವರ್ಷಗಳ ಬಳಿಕವೂ ಮರೆಯದ ನಿಷ್ಠೆ :

ಆರೋಗ್ಯ ಸಮಸ್ಯೆ ಹಾಗೂ ವೈಯಕ್ತಿಕ ಕಾರಣಗಳಿಂದಾಗಿ ಹಲವು ವರ್ಷಗಳ ಕಾಲ ಲಿಲ್ಲಿಯನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಮಧ್ಯಂತರದಲ್ಲಿ ಸ್ನೇಹಿತರು ಮತ್ತು ನೆರೆಹೊರೆಯವರು ಲಿಲ್ಲಿಯ ಫೋಟೋಗಳನ್ನು ಕಳುಹಿಸುತ್ತಿದ್ದರು. ಅವುಗಳನ್ನು ನೋಡಿ ಅವಳು ಸುರಕ್ಷಿತವಾಗಿದ್ದಾಳೆ ಎಂಬ ನಿಟ್ಟುಸಿರು ಬಿಡುತ್ತಿದ್ದರು.

ಅನಂತರ ಕೊನೆಗೂ ಆ ಸ್ಥಳಕ್ಕೆ ಭೇಟಿ ನೀಡಿದ ಚಿರಾಗ್, ದೂರದಿಂದಲೇ ಲಿಲ್ಲಿಯನ್ನು ಗುರುತಿಸಿದರು. ಆದರೆ ಅವಳು ತನ್ನನ್ನು ಗುರುತಿಸಬಹುದೇ ಎಂಬ ಅಳುಕು ಅವರಿಗೆ ಇತ್ತು.

ಆದರೆ ಮುಂದಿನ ಕ್ಷಣವೇ ಎಲ್ಲ ಸಂಶಯಗಳು ಮಾಯವಾದವು.

ನಾಯಿ ಲಿಲ್ಲಿ ವಿಡಿಯೋ :

ಮಾಲಿಕನನ್ನು ಕಂಡೊಡನೆ ಓಡಿ ಬಂದ ಲಿಲ್ಲಿ ; ಹೃದಯ ಸ್ಪರ್ಶಿ ಕ್ಷಣ :

ಚಿರಾಗ್ ರಸ್ತೆಯ ಆ ಕಡೆ ನಿಂತು “ಲಿಲ್ಲಿ” ಎಂದು ಕರೆಯುತ್ತಿದ್ದಂತೆಯೇ, ಒಂದು ಕ್ಷಣ ನಿಂತ ನಾಯಿ ತಕ್ಷಣವೇ ಅವರನ್ನು ಗುರುತಿಸಿ ಓಡಿಬಂದು ಮುದ್ದಾಡಿತು. ಆ ಕ್ಷಣದ ಭಾವುಕ ದೃಶ್ಯವೇ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

“ಇಷ್ಟು ವರ್ಷಗಳಾದರೂ ಅವಳು ನನ್ನನ್ನು ಮರೆತಿರಲಿಲ್ಲ. ಆ ಪ್ರೀತಿ ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ವಿಡಿಯೋವೇ ಎಲ್ಲವನ್ನೂ ಹೇಳುತ್ತದೆ” ಎಂದು ಚಿರಾಗ್ ಹೇಳಿದ್ದಾರೆ.

ವೈರಲ್ ವಿಡಿಯೋಗೆ ಮಳೆಮಾಡಿದ ಪ್ರತಿಕ್ರಿಯೆಗಳು :

ಈ ವಿಡಿಯೋಗೆ ಈಗಾಗಲೇ 4.45 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಲಭಿಸಿದ್ದು, ನೂರಾರು ಭಾವುಕ ಕಾಮೆಂಟ್‌ಗಳು ಬರುತ್ತಿವೆ.

  • 👉 “ನಾಯಿಗಳು ನಿಜವಾದ ಪ್ರೀತಿ ಎಂದರೇನು ಎಂಬುದನ್ನು ಕಲಿಸುತ್ತವೆ”.
  • 👉 “ಮಾನವಕ್ಕಿಂತ ಹೆಚ್ಚು ನಿಷ್ಠೆ ಹೊಂದಿರುವ ಜೀವಿಗಳು”.
  • 👉 “ಈ ವಿಡಿಯೋ ನೋಡಿದಾಗ ಕಣ್ಣೀರು ತಡೆಯಲಾಗಲಿಲ್ಲ”. ಎಂದು ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ.

ಒಬ್ಬ ಬಳಕೆದಾರರು, “ನಾನು ದಿನವೂ ಆ ರಸ್ತೆಯಲ್ಲಿ ಹೋಗುತ್ತೇನೆ, ಲಿಲ್ಲಿಯನ್ನು ನೋಡಿಕೊಂಡು ಒಬ್ಬ ವಾಚ್‌ಮನ್ ಇದ್ದಾನೆ. ಅವಳು ಸುರಕ್ಷಿತವಾಗಿದ್ದಾಳೆ” ಎಂದು ಭರವಸೆ ನೀಡಿದ್ದಾರೆ.

ಇದನ್ನು ಓದಿ : ನಿಷ್ಠೆಗೆ ಸಾಕ್ಷಿ: 4 ದಿನ ಮಾಲೀಕನ ಶವ ಕಾವಲು ಕಾಯ್ದ ನಾಯಿ; ವಿಡಿಯೋ ವೈರಲ್‌.

ನಾಯಿ – ನಿಷ್ಠೆ ಮತ್ತು ಪ್ರೀತಿಯ ಜೀವಂತ ರೂಪ :

ಈ ಘಟನೆ ಮತ್ತೊಮ್ಮೆ ಸಾಬೀತು ಮಾಡಿದೆ –

  • ನಾಯಿಗಳು ಪ್ರೀತಿಯನ್ನು ಮರೆತು ಮರೆಯುವುದಿಲ್ಲ.
  • ಅವುಗಳಿಗೆ ಸ್ವಾರ್ಥವಿಲ್ಲ.
  • ಒಮ್ಮೆ ಒಲಿಸಿದರೆ ಜೀವಮಾನಪೂರ್ತಿ ನಿಷ್ಠೆ. ಮಾನವರಿಗೆ ಪ್ರೀತಿಯ ಅರ್ಥವನ್ನು ಕಲಿಸುವ ಮೌನ ಜೀವಿಗಳು ನಾಯಿಗಳೇ ಎಂಬುದಕ್ಕೆ ಇದು ಜೀವಂತ ಉದಾಹರಣೆ.

Disclaimer: ಈ ಸುದ್ದಿಯಲ್ಲಿ ಉಲ್ಲೇಖಿಸಿರುವ ವಿಡಿಯೋ ಮತ್ತು ಮಾಹಿತಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಆಧಾರದ ಮೇಲೆ ನೀಡಲಾಗಿದೆ. ಇದರ ನಿಖರತೆಯನ್ನು ನಮ್ಮ ವೆಬ್‌ಸೈಟ್ ಖಚಿತಪಡಿಸುವುದಿಲ್ಲ.

ಆದಾಯ ತೆರಿಗೆ ಇಲಾಖೆಯಲ್ಲಿ ಖಾಲಿ ಹುದ್ದೆಗಳ ನೇಮಕಾತಿ: ಅರ್ಜಿ ಸಲ್ಲಿಸಲು ಜ.31 ಕೊನೆಯ ದಿನ.

0

ಜನಸ್ಪಂದನ ನ್ಯೂಸ್‌, ನೌಕರಿ : ಕೇಂದ್ರ ಸರ್ಕಾರದ ಪ್ರತಿಷ್ಠಿತ ಮತ್ತು ವಿಶ್ವಾಸಾರ್ಹ ಇಲಾಖೆಯಲ್ಲಿ ಉದ್ಯೋಗ ಪಡೆಯುವ ಕನಸು ಕಾಣುತ್ತಿರುವ ಅಭ್ಯರ್ಥಿಗಳಿಗೆ ಇದು ಅತ್ಯುತ್ತಮ ಅವಕಾಶವಾಗಿದೆ. ಆದಾಯ ತೆರಿಗೆ ಇಲಾಖೆ ವಿವಿಧ ಹುದ್ದೆಗಳಿಗಾಗಿ ಅಧಿಕೃತವಾಗಿ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಈ ನೇಮಕಾತಿ ಅಭಿಯಾನದ ಮೂಲಕ ತೆರಿಗೆ ಸಹಾಯಕ, ಸ್ಟೆನೋಗ್ರಾಫರ್ ಹಾಗೂ ಮಲ್ಟಿ-ಟಾಸ್ಕಿಂಗ್ ಸ್ಟಾಫ್ (MTS) ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಸರ್ಕಾರಿ ಉದ್ಯೋಗದ ಸ್ಥಿರತೆ, ಉತ್ತಮ ವೇತನ ಮತ್ತು ಭವಿಷ್ಯದ ಭದ್ರತೆಯನ್ನು ಬಯಸುವವರಿಗೆ ಇದು ಸುವರ್ಣಾವಕಾಶವಾಗಿದೆ.

ಆದಾಯ ತೆರಿಗೆ ಇಲಾಖೆಯ ಹುದ್ದೆಗಳ ವಿವರ :

ಈ ನೇಮಕಾತಿಯಲ್ಲಿ ಒಟ್ಟು 97 ಹುದ್ದೆಗಳು ಲಭ್ಯವಿವೆ.

  • ತೆರಿಗೆ ಸಹಾಯಕ (Tax Assistant) – 47 ಹುದ್ದೆಗಳು.
  • ಮಲ್ಟಿ-ಟಾಸ್ಕಿಂಗ್ ಸ್ಟಾಫ್ (MTS) – 38 ಹುದ್ದೆಗಳು.
  • ಸ್ಟೆನೋಗ್ರಾಫರ್ ಗ್ರೇಡ್–II – 12 ಹುದ್ದೆಗಳು.

ಹುದ್ದೆಗಳ ಸಂಖ್ಯೆ ಆಡಳಿತಾತ್ಮಕ ಅಗತ್ಯತೆಗಳ ಆಧಾರದಲ್ಲಿ ಬದಲಾಗುವ ಸಾಧ್ಯತೆ ಇದೆ. ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಕಡ್ಡಾಯವಾಗಿ ಪರಿಶೀಲಿಸಬೇಕು.

ಅರ್ಹತಾ ಮಾನದಂಡಗಳು :

ಈ ಸುದ್ದಿನೂ ಓದಿ : ಪ್ರೀತಿ-ಪ್ರೇಮದ ಹೆಸರಿನಲ್ಲಿ 3 ಮದುವೆ: ಲಕ್ಷಾಂತರ ರೂ. ವಂಚಿಸಿದ ಮಹಿಳೆ.

ತೆರಿಗೆ ಸಹಾಯಕ :

  • 10ನೇ ಅಥವಾ 12ನೇ ತರಗತಿ ಉತ್ತೀರ್ಣರಾಗಿರಬೇಕು.
  • ಕಂಪ್ಯೂಟರ್ ಡೇಟಾ ಎಂಟ್ರಿ ಬಗ್ಗೆ ಮೂಲಭೂತ ಜ್ಞಾನ ಅಗತ್ಯ.
  • ಕೌಶಲ್ಯ ಪರೀಕ್ಷೆ ಇರಬಹುದು.

ಸ್ಟೆನೋಗ್ರಾಫರ್ :

  • 12ನೇ ತರಗತಿ ಪಾಸ್.
  • ಹಿಂದಿ ಅಥವಾ ಇಂಗ್ಲಿಷ್ ಸ್ಟೆನೋಗ್ರಫಿ ಮತ್ತು ಟೈಪಿಂಗ್ ಜ್ಞಾನ ಅಗತ್ಯ.

ಮಲ್ಟಿ-ಟಾಸ್ಕಿಂಗ್ ಸ್ಟಾಫ್ (MTS) :

  • ಕನಿಷ್ಠ 10ನೇ ತರಗತಿ ಉತ್ತೀರ್ಣರಾಗಿರಬೇಕು.
  • ಕೆಲವು ಹುದ್ದೆಗಳಿಗೆ ಪದವಿ ಅಥವಾ ಸಂಬಂಧಿತ ಅನುಭವ ಅಗತ್ಯವಾಗಬಹುದು.

ಆಯ್ಕೆ ಪ್ರಕ್ರಿಯೆ :

ಈ ನೇಮಕಾತಿಯ ಪ್ರಮುಖ ವಿಶೇಷತೆ ಎಂದರೆ ಬಹುತೇಕ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಇರುವುದಿಲ್ಲ.

ಆಯ್ಕೆ ಪ್ರಕ್ರಿಯೆ:

  • ಕೌಶಲ್ಯ ಪರೀಕ್ಷೆ.
  • ಟ್ರೇಡ್ ಟೆಸ್ಟ್.
  • ದಾಖಲೆ ಪರಿಶೀಲನೆ.

ಅಂತಿಮ ಆಯ್ಕೆ ಅಭ್ಯರ್ಥಿಯ ಅರ್ಹತೆ ಹಾಗೂ ಕಾರ್ಯಕ್ಷಮತೆಯ ಆಧಾರದಲ್ಲಿರುತ್ತದೆ.

ವೇತನ ವಿವರ :

ಹುದ್ದೆಮಾಸಿಕ ವೇತನ
ಆಡಳಿತಾಧಿಕಾರಿ₹44,900 – ₹1,42,400
ತೆರಿಗೆ ನಿರೀಕ್ಷಕ₹35,400 – ₹1,12,400
ತೆರಿಗೆ ಸಹಾಯಕ / ಸ್ಟೆನೋಗ್ರಾಫರ್₹25,500 – ₹81,100
ಮಲ್ಟಿ-ಟಾಸ್ಕಿಂಗ್ ಸ್ಟಾಫ್₹18,000 – ₹56,900

➡️ ಇದಕ್ಕೇರಿಯಾಗಿ ಡಿಎ, ಎಚ್‌ಆರ್‌ಎ ಹಾಗೂ ಇತರೆ ಕೇಂದ್ರ ಸರ್ಕಾರಿ ಭತ್ಯೆಗಳು ಲಭ್ಯವಿರುತ್ತವೆ.

ಪ್ರಮುಖ ದಿನಾಂಕ :

  • ಅರ್ಜಿಯ ಕೊನೆಯ ದಿನಾಂಕ: 31 ಜನವರಿ 2026

ಅಭ್ಯರ್ಥಿಗಳು ಕೊನೆಯ ದಿನಕ್ಕಾಗಿ ಕಾಯದೆ ಬೇಗನೆ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಇದನ್ನು ಓದಿ : SBI ನೇಮಕಾತಿ 2026: ಸರ್ಕಲ್ ಬೇಸ್‌ಡ್ ಆಫೀಸರ್ ಹುದ್ದೆಗಳಿಗೆ ಇಂದಿನಿಂದ ಅರ್ಜಿ ಆಹ್ವಾನ.

ಅರ್ಜಿ ಸಲ್ಲಿಸುವ ವಿಧಾನ :

  1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
    👉 https://www.incometaxindia.gov.in
  2. ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ.
  3. ಆನ್‌ಲೈನ್ ಅರ್ಜಿ ಲಿಂಕ್ ಕ್ಲಿಕ್ ಮಾಡಿ.
  4. ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ.
  5. ದಾಖಲೆಗಳನ್ನು ಅಪ್‌ಲೋಡ್ ಮಾಡಿ.
  6. ಅರ್ಜಿಯನ್ನು ಸಲ್ಲಿಸಿ.
  7. ಅರ್ಜಿ ಪ್ರತಿಯನ್ನು ಡೌನ್‌ಲೋಡ್ ಮಾಡಿ ಅಥವಾ ಸ್ಕ್ರೀನ್‌ಶಾಟ್ ಉಳಿಸಿ.

ಮಹತ್ವದ ಸೂಚನೆ : ಅರ್ಜಿಯನ್ನು ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಕಡ್ಡಾಯವಾಗಿ ಓದಬೇಕು. ತಪ್ಪು ಮಾಹಿತಿ ನೀಡಿದಲ್ಲಿ ಅರ್ಜಿ ರದ್ದಾಗುವ ಸಾಧ್ಯತೆ ಇದೆ. ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಅಧಿಕೃತ ಅಧಿಸೂಚನೆ ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯ ಆಧಾರದಲ್ಲಿದೆ. ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಅಧಿಸೂಚನೆಯನ್ನು ಕಡ್ಡಾಯವಾಗಿ ಪರಿಶೀಲಿಸಬೇಕು. ಯಾವುದೇ ತಪ್ಪು ಮಾಹಿತಿ, ದಿನಾಂಕ ಬದಲಾವಣೆ ಅಥವಾ ನೇಮಕಾತಿ ಸಂಬಂಧಿತ ನಿರ್ಧಾರಗಳಿಗೆ ನಮ್ಮ ವೆಬ್‌ಸೈಟ್ ಹೊಣೆಗಾರರಲ್ಲ. ಅಧಿಕೃತ ಮಾಹಿತಿಯೇ ಅಂತಿಮವಾಗಿರುತ್ತದೆ.

ಪ್ರೀತಿ-ಪ್ರೇಮದ ಹೆಸರಿನಲ್ಲಿ 3 ಮದುವೆ: ಲಕ್ಷಾಂತರ ರೂ. ವಂಚಿಸಿದ ಮಹಿಳೆ.

0

ಜನಸ್ಪಂದನ ನ್ಯೂಸ್, ದೊಡ್ಡಬಳ್ಳಾಪುರ: ಪ್ರೀತಿ ಹಾಗೂ ಮದುವೆಯ ಹೆಸರಿನಲ್ಲಿ ಪುರುಷರನ್ನು ನಂಬಿಸಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿದ ಆರೋಪದ ಮೇಲೆ ದೊಡ್ಡಬಳ್ಳಾಪುರ ತಾಲೂಕಿನ ಮಹಿಳೆಯೊಬ್ಬಳ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಸುಧಾರಾಣಿ ಎಂಬ ಮಹಿಳೆ ವಿರುದ್ಧ ಇಬ್ಬರು ಗಂಡಂದಿರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪ್ರಕರಣ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಪ್ರೀತಿ-ಪ್ರೇಮ ; ಮೂರು ಮದುವೆ – ಒಂದೇ ಉದ್ದೇಶ?

ಮದುವೆಯ ಮೂಲಕ ಹಣ ದೋಚುವ ಉದ್ದೇಶದಿಂದಲೇ ಸುಧಾರಾಣಿ ಮೂರು ಮದುವೆ ಮಾಡಿಕೊಂಡಿದ್ದಾಳೆ ಎಂಬ ಆರೋಪಗಳು ಕೇಳಿಬಂದಿವೆ. ಪ್ರೀತಿ, ಪ್ರೇಮ ಎಂಬ ಹೆಸರಿನಲ್ಲಿ ಗಂಡಸರನ್ನು ನಂಬಿಸಿ ಬಳಿಕ ಹಣ ಪಡೆದು ದೂರವಾಗುತ್ತಿದ್ದಾಳೆ ಎಂದು ಆರೋಪಿಸಲಾಗಿದೆ.

ಮೊದಲ ಗಂಡನಿಂದ ದೂರವಾದ ಸುಧಾರಾಣಿ :

ಸುಧಾರಾಣಿ ಮೊದಲಿಗೆ ವೀರೇಗೌಡ ಎಂಬವರನ್ನು ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳೂ ಇದ್ದರು. ಆದರೆ ಕೆಲ ವರ್ಷಗಳ ಬಳಿಕ “ನೀನು ಜೀವನ ನಡೆಸಲು ತಕ್ಕವನಲ್ಲ” ಎಂದು ಹೇಳಿ ಗಂಡ ಮತ್ತು ಮಕ್ಕಳನ್ನು ಬಿಟ್ಟು ಹೋಗಿದ್ದಾಳೆ ಎಂಬ ಆರೋಪವಿದೆ.

ಈ ಸುದ್ದಿನೂ ಓದಿ : ಅಂತರ್ಜಾತಿ ಪ್ರೀತಿಗಾಗಿ 19 ವರ್ಷದ ತಂಗಿಯ ಕೊಲೆ ; ಸಹೋದರ, ಸ್ನೇಹಿತನ ಬಂಧನ.

ಡೆಲಿವರಿ ಬಾಯ್ ಜೊತೆ ಎರಡನೇ ಮದುವೆ :

ಮೊದಲ ಗಂಡನಿಂದ ದೂರವಾದ ನಂತರ ಸುಧಾರಾಣಿ, ಅನಂತಮೂರ್ತಿ ಎಂಬ ಡೆಲಿವರಿ ಬಾಯ್ ಪರಿಚಯ ಮಾಡಿಕೊಂಡು, ತನ್ನ ಮೊದಲ ಗಂಡ ಮೃತಪಟ್ಟಿದ್ದಾನೆ ಎಂದು ಸುಳ್ಳು ಹೇಳಿ ದೇವಸ್ಥಾನದಲ್ಲಿ ಮದುವೆಯಾಗಿದ್ದಾಳೆ ಎಂದು ಹೇಳಲಾಗಿದೆ.

ಮದುವೆಯ ನಂತರ ‘ಮಾವನ ಚಿಕಿತ್ಸೆ’, ‘ಕುಟುಂಬದ ಸಮಸ್ಯೆ’ ಎಂಬ ಕಾರಣ ಹೇಳಿ ಸುಮಾರು 20 ಲಕ್ಷ ರೂಪಾಯಿಗೂ ಅಧಿಕ ಹಣವನ್ನು ಅನಂತಮೂರ್ತಿಯಿಂದ ಪಡೆದು ಬಳಿಕ ಸಂಪರ್ಕ ಕಡಿತ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.

ಮೂರನೇ ಮದುವೆಯ ಆರೋಪ :

ಇದೇ ವೇಳೆ, ಸುಧಾರಾಣಿ ಈಗಾಗಲೇ ಕನಕಪುರ ಮೂಲದ ಮತ್ತೊಬ್ಬ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ ಎಂಬ ಆರೋಪವೂ ಕೇಳಿಬಂದಿದೆ. ಹಣವಿರುವವರನ್ನು ಗುರಿಯಾಗಿಸಿಕೊಂಡು ಮದುವೆ ಎಂಬ ನೆಪದಲ್ಲಿ ವಂಚನೆ ಮಾಡುತ್ತಿದ್ದಾಳೆ ಎಂದು ಮೊದಲ ಗಂಡ ಆರೋಪಿಸಿದ್ದಾರೆ.

ಪೊಲೀಸ್ ಠಾಣೆ ಮೆಟ್ಟಿಲೇರಿದ ಗಂಡಂದಿರು :

ತಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಇಬ್ಬರು ಗಂಡಂದಿರು ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣದ ಕುರಿತು ತನಿಖೆ ಆರಂಭವಾಗಿದೆ. ಮಹಿಳೆಯ ವಿರುದ್ಧ ವಂಚನೆ, ಮೋಸ ಹಾಗೂ ನಂಬಿಕೆ ದ್ರೋಹದ ಆರೋಪಗಳು ದಾಖಲಾಗಿವೆ.

ಇದನ್ನು ಓದಿ : ಪ್ರೀತಿ ವಿಚಾರಕ್ಕೆ Instagram ಸ್ನೇಹಿತನಿಂದ 21 ವರ್ಷದ ಯುವತಿ ಮೇಲೆ ಹಲ್ಲೆ.

ಪೊಲೀಸರು ಏನು ಕ್ರಮ ಕೈಗೊಳ್ಳುತ್ತಾರೆ?

ಮದುವೆ ಹೆಸರಲ್ಲಿ ನಡೆದಿರುವ ಈ ವಂಚನೆ ಪ್ರಕರಣದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದು, ಸುಧಾರಾಣಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಈ ಘಟನೆ ಇದೀಗ ಸ್ಥಳೀಯ ಮಟ್ಟದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

Courtesy : News 18 Kannada


Disclaimer : ಈ ಸುದ್ದಿಯಲ್ಲಿ ಉಲ್ಲೇಖಿಸಿರುವ ಮಾಹಿತಿಗಳು ದೂರುದಾರರು ಹಾಗೂ ಪೊಲೀಸ್ ಮೂಲಗಳಿಂದ ಲಭ್ಯವಾದ ಮಾಹಿತಿಯ ಆಧಾರದಲ್ಲಿವೆ. ತನಿಖೆ ಪ್ರಗತಿಯಲ್ಲಿದ್ದು, ಆರೋಪಗಳು ನ್ಯಾಯಾಲಯದಲ್ಲಿ ಸಾಬೀತಾಗುವವರೆಗೂ ಆರೋಪಿತ ವ್ಯಕ್ತಿಯನ್ನು ದೋಷಿ ಎಂದು ಪರಿಗಣಿಸಲಾಗುವುದಿಲ್ಲ. ಈ ವರದಿ ಸಾರ್ವಜನಿಕ ಹಿತದೃಷ್ಟಿಯಿಂದ ಪ್ರಕಟಿಸಲಾಗಿದೆ.

SBI ನೇಮಕಾತಿ 2026: ಸರ್ಕಲ್ ಬೇಸ್‌ಡ್ ಆಫೀಸರ್ ಹುದ್ದೆಗಳಿಗೆ ಇಂದಿನಿಂದ ಅರ್ಜಿ ಆಹ್ವಾನ.

0

ಜನಸ್ಪಂದನ ನ್ಯೂಸ್‌, ನೌಕರಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಸರ್ಕಲ್ ಬೇಸ್‌ಡ್ ಆಫೀಸರ್ (CBO) ನೇಮಕಾತಿ 2026 ಅಧಿಸೂಚನೆಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ನೇಮಕಾತಿಯ ಮೂಲಕ ದೇಶದ ವಿವಿಧ ವಲಯಗಳಲ್ಲಿ ಒಟ್ಟು 2050 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಕರ್ನಾಟಕದಲ್ಲಿ 200 ಹುದ್ದೆಗಳು ಲಭ್ಯವಿವೆ.

ಬೆಂಗಳೂರು, ಹುಬ್ಬಳ್ಳಿ/ಧಾರವಾಡ, ಕಲಬುರಗಿ, ಮೈಸೂರು ಹಾಗೂ ಮಂಗಳೂರು ವಲಯಗಳಲ್ಲಿ ಕೆಲಸ ಮಾಡಲು ಆಸಕ್ತರು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಅರ್ಜಿ ಸಲ್ಲಿಕೆ ಪ್ರಕ್ರಿಯೆ 2026 ಜನವರಿ 29ರಿಂದ ಆರಂಭವಾಗಿದ್ದು, ಫೆಬ್ರವರಿ 18ರವರೆಗೆ ನಡೆಯಲಿದೆ.

ಪ್ರಮುಖ ದಿನಾಂಕಗಳು :

  • ಆನ್‌ಲೈನ್ ಅರ್ಜಿ ಆರಂಭ: 29 ಜನವರಿ 2026.
  • ಅರ್ಜಿಗೆ ಕೊನೆಯ ದಿನ: 18 ಫೆಬ್ರವರಿ 2026.
  • ಶುಲ್ಕ ಪಾವತಿ ಕೊನೆಯ ದಿನ: 18 ಫೆಬ್ರವರಿ 2026.
  • ಆನ್‌ಲೈನ್ ಪರೀಕ್ಷೆ: ಮಾರ್ಚ್ 2026 (ತಾತ್ಕಾಲಿಕ).
  • ಹಾಲ್ ಟಿಕೆಟ್ ಬಿಡುಗಡೆ: ಪರೀಕ್ಷೆಗೆ ಮೊದಲು.
  • ಫಲಿತಾಂಶ: ಶೀಘ್ರದಲ್ಲೇ ಪ್ರಕಟಣೆ.

ಅರ್ಜಿ ಶುಲ್ಕ :

ವರ್ಗಶುಲ್ಕ
ಜನರಲ್ / ಓಬಿಸಿ / ಇಡಬ್ಲ್ಯುಎಸ್ :₹750
ಎಸ್ಸಿ / ಎಸ್ಟಿ / ಪಿಡಬ್ಲ್ಯೂಡಿ :ಶುಲ್ಕವಿಲ್ಲ

ಪಾವತಿ ವಿಧಾನಗಳು: ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್‌ನೆಟ್ ಬ್ಯಾಂಕಿಂಗ್, ಐಎಂಪಿಎಸ್, ಮೊಬೈಲ್ ವಾಲೆಟ್.

ಈ ಉದ್ಯೋಗ ಸುದ್ದಿ ಓದಿ : ಇಂಡಿಯಾ ಪೋಸ್ಟ್ GDS ಮತ್ತು ರೈಲ್ವೆ ನೇಮಕಾತಿ – 2026 : 50,000 ಹುದ್ದೆಗಳ ಭರ್ತಿ.

ವಯೋಮಿತಿ :

  • ಕನಿಷ್ಠ ವಯಸ್ಸು: 21 ವರ್ಷ.
  • ಗರಿಷ್ಠ ವಯಸ್ಸು: 30 ವರ್ಷ.

ಸರ್ಕಾರದ ನಿಯಮಾನುಸಾರ ಮೀಸಲಾತಿ ವರ್ಗಗಳಿಗೆ ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.

ಒಟ್ಟು ಹುದ್ದೆಗಳ ವಿವರ :

  • ದೇಶದ ವಿವಿಧ ವಲಯಗಳಲ್ಲಿ ಒಟ್ಟು ಹುದ್ದೆಗಳು: 2050.
  • ಕರ್ನಾಟಕ: 200.
  • ಕೇರಳ / ಲಕ್ಷದ್ವೀಪ: 50 (ಮಲಯಾಳಂ ಭಾಷಾ ಪ್ರಾವೀಣ್ಯತೆ ಅಗತ್ಯ).

ಹುದ್ದೆಯ ಹೆಸರು :

👉 ಸರ್ಕಲ್ ಬೇಸ್‌ಡ್ ಆಫೀಸರ್ (CBO)

ವಿದ್ಯಾರ್ಹತೆ :

  • ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಪದವಿ.
  • ಆಯಾ ವಲಯದ ಸ್ಥಳೀಯ ಭಾಷೆ ಓದಲು, ಬರೆಯಲು ಮತ್ತು ಅರ್ಥಮಾಡಿಕೊಳ್ಳಲು ತಿಳಿದಿರಬೇಕು.
  • ಕಮರ್ಷಿಯಲ್ ಬ್ಯಾಂಕ್ ಅಥವಾ ಆರ್‌ಆರ್‌ಬಿಯಲ್ಲಿ ಕನಿಷ್ಠ 2 ವರ್ಷಗಳ ಅನುಭವ ಇದ್ದವರಿಗೆ ಆದ್ಯತೆ.
  • ಅಭ್ಯರ್ಥಿಗಳು ಒಂದೇ ಸರ್ಕಲ್‌ಗೆ ಮಾತ್ರ ಅರ್ಜಿ ಸಲ್ಲಿಸಬಹುದು.
  • SMGS–IV ಹಂತದವರೆಗೆ ಅಥವಾ 12 ವರ್ಷ ಪೂರ್ಣಗೊಳ್ಳುವವರೆಗೆ ಅಂತರ್ ವಲಯ ವರ್ಗಾವಣೆ ಇರುವುದಿಲ್ಲ.

ಆಯ್ಕೆ ಪ್ರಕ್ರಿಯೆ :

1️⃣ ಆನ್‌ಲೈನ್ ಪರೀಕ್ಷೆ :

ಒಟ್ಟು ಅಂಕಗಳು: 120 | ಸಮಯ: 2 ಗಂಟೆ

ವಿಷಯಪ್ರಶ್ನೆಗಳುಅಂಕ
ಇಂಗ್ಲಿಷ್ ಭಾಷೆ3030
ಬ್ಯಾಂಕಿಂಗ್ ಜ್ಞಾನ4040
ಸಾಮಾನ್ಯ ಜ್ಞಾನ / ಅರ್ಥವ್ಯವಸ್ಥೆ3030
ಕಂಪ್ಯೂಟರ್ ಜ್ಞಾನ2020

➡️ ನೆಗಟಿವ್ ಮಾರ್ಕಿಂಗ್ ಇಲ್ಲ

2️⃣ ವಿವರಣಾತ್ಮಕ ಪರೀಕ್ಷೆ :

  • ಪತ್ರ ಬರವಣಿಗೆ
  • ಪ್ರಬಂಧ
  • ಅಂಕಗಳು: 50
  • ಸಮಯ: 30 ನಿಮಿಷ

3️⃣ ಸಂದರ್ಶನ :

  • ಅಂಕಗಳು: 50
  • ಅರ್ಹತಾ ಅಂಕಗಳ ಆಧಾರದಲ್ಲಿ ಆಯ್ಕೆ

ಅಂತಿಮ ಆಯ್ಕೆ ವಿಧಾನ :

  • 👉 ಆನ್‌ಲೈನ್ ಪರೀಕ್ಷೆ – 75%
  • 👉 ಸಂದರ್ಶನ – 25%

➡️ ಸಾಮಾನ್ಯೀಕೃತ ಅಂಕಗಳ ಆಧಾರದ ಮೇಲೆ ಅಂತಿಮ ಮೆರಿಟ್ ಪಟ್ಟಿ ಸಿದ್ಧಪಡಿಸಲಾಗುತ್ತದೆ.

ಸ್ಥಳೀಯ ಭಾಷಾ ಪರೀಕ್ಷೆ :

  • 10ನೇ ಅಥವಾ 12ನೇ ತರಗತಿಯ ಪ್ರಮಾಣಪತ್ರ ಕಡ್ಡಾಯ.
  • ಆಯ್ಕೆಗೊಂಡ ಅಭ್ಯರ್ಥಿಗಳು ಸ್ಥಳೀಯ ಭಾಷೆಯಲ್ಲಿ ಪ್ರಾವೀಣ್ಯತೆ ಹೊಂದಿರಬೇಕು.

ಅರ್ಜಿ ಸಲ್ಲಿಸಲು ಅಧಿಕೃತ ಲಿಂಕ್ :

👉 https://ibpsreg.ibps.in/sbicbonov25/

ಪ್ರಮುಖ ಸೂಚನೆ :

✔️ ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳಿ.

✔️ ತಪ್ಪು ಮಾಹಿತಿ ನೀಡಿದರೆ ಅರ್ಜಿ ರದ್ದು ಆಗಬಹುದು.

✔️ ಕೊನೆಯ ದಿನದವರೆಗೆ ಕಾಯದೇ ಅರ್ಜಿ ಸಲ್ಲಿಸುವುದು ಉತ್ತಮ.

ಇದನ್ನು ಓದಿ : ಎಂದಿಗೂ ಕನ್ನಡ ಮಾತನಾಡಲ್ಲ : SBI ಲೇಡಿ ಬ್ಯಾಂಕ್‌ ಮ್ಯಾನೇಜರ್‌ ಸೊಕ್ಕಿನ ಮಾತು.


📢 ಈ SBI ಮಾಹಿತಿ ನಿಮಗೆ ಉಪಯುಕ್ತವಾಗಿದ್ದರೆ, ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ. ಬ್ಯಾಂಕ್ ಉದ್ಯೋಗದ ಕನಸಿರುವವರಿಗೆ ಇದು ಉತ್ತಮ ಅವಕಾಶ!


Disclaimer : ಈ ಸುದ್ದಿಯಲ್ಲಿ ನೀಡಿರುವ ಮಾಹಿತಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಅಧಿಕೃತ ಅಧಿಸೂಚನೆ ಆಧಾರಿತವಾಗಿದೆ. ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿಯನ್ನು ಪರಿಶೀಲಿಸುವಂತೆ ವಿನಂತಿ. ಯಾವುದೇ ತಪ್ಪು ಅಥವಾ ಬದಲಾವಣೆಗಳಿಗೆ ನಮ್ಮ ವೆಬ್‌ಸೈಟ್ ಹೊಣೆಗಾರರಲ್ಲ.

ಇನ್‌ಸ್ಟಾಗ್ರಾಂ ಪ್ರೇಮಿಗಾಗಿ ನಿದ್ರಾಜನಕ ಇಂಜೆಕ್ಷನ್ ನೀಡಿ ಪೋಷಕರನ್ನೇ ಕೊಂದಳಾ ನರ್ಸ್.!

0

ಜನಸ್ಪಂದನ ನ್ಯೂಸ್‌, ಹೈದರಾಬಾದ್‌ : ವಿಕಾರಾಬಾದ್ ಜಿಲ್ಲೆಯ ಬಂಟ್ವಾರಂ ಮಂಡಲದ ಯಾಚಾರಂ ಗ್ರಾಮದಲ್ಲಿ ಸಂಭವಿಸಿದ ಭೀಕರ ಘಟನೆ ಜನರಲ್ಲಿ ಭಾರೀ ಆಘಾತಕ್ಕೆ ಕಾರಣವಾಗಿದೆ. ತನ್ನ ವೃತ್ತಿಪರ ಜ್ಞಾನವನ್ನು ದುರುಪಯೋಗಪಡಿಸಿಕೊಂಡು ನಿದ್ರಾಜನಕ ಇಂಜೆಕ್ಷನ್ (A sedative injection) ನೀಡಿ ತಂದೆ-ತಾಯಿಯನ್ನು ಕೊಂದ ಆರೋಪದ ಮೇಲೆ 25 ವರ್ಷದ ನರ್ಸ್‌ನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ನಕ್ಕಲ ಸುರೇಖಾ ಎಂದು ಗುರುತಿಸಲಾಗಿದ್ದು, ಆಕೆ ಸಂಗಾರೆಡ್ಡಿಯ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದಳು. ಆರೋಪದ ಪ್ರಕಾರ, ಸುರೇಖಾ ತನ್ನ ತಾಯಿ ಲಕ್ಷ್ಮೀ (54) ಮತ್ತು ತಂದೆ ದಶರಥ್ (58) ಅವರಿಗೆ ಆರ್ಟಾಸಿಲ್ (Artacil) ಎಂಬ ನಿದ್ರಾಜನಕ ಔಷಧಿಯನ್ನು ಅಧಿಕ ಪ್ರಮಾಣದಲ್ಲಿ ಇಂಜೆಕ್ಟ್ ಮಾಡಿ ಹತ್ಯೆ ಮಾಡಿದ್ದಾಳೆ.

ಸಂಬಂಧವೇ ಕಾರಣವಾಯಿತೇ?

ಪೊಲೀಸರ ತನಿಖೆಯ ಪ್ರಕಾರ, ಸುರೇಖಾ ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾದ ಯುವಕನೊಂದಿಗೆ ಸಂಬಂಧ ಹೊಂದಿದ್ದಳು. ಆತ ಬೇರೆ ಜಾತಿಗೆ ಸೇರಿದವನಾಗಿದ್ದ ಕಾರಣ, ಆಕೆಯ ಪೋಷಕರು ಈ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಮನೆಯಲ್ಲಿ ನಿರಂತರ ಕಲಹ ಉಂಟಾಗುತ್ತಿದ್ದು, ಈ ವೈಮನಸ್ಸೇ ಕೊಲೆಗಾಗಿಯೇ ಕಾರಣವಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಈ ಕ್ರೈಂ ಸುದ್ದಿ ಓದಿ :‌ ಶಾಲೆಗೆ ಹೋಗಲು ಹಠ ಹಿಡಿದ ಮಗ: ಪಟ್ಟು ಹಿಡಿದ ತಾಯಿ ; ವಿಡಿಯೋ ವೈರಲ್.

ವೈದ್ಯಕೀಯ ಜ್ಞಾನವೇ ಅಪರಾಧಕ್ಕೆ ಉಪಯೋಗ :

ನರ್ಸಿಂಗ್ ತರಬೇತಿ ಪಡೆದಿದ್ದ ಸುರೇಖಾ, ತನ್ನ ಮೇಲೆ ಅನುಮಾನ ಬರದಂತೆ ಕೊಲೆ ಮಾಡಬಹುದು ಎಂಬ ಭ್ರಮೆಯಲ್ಲಿ ಇತ್ತೆಂದು ಪೊಲೀಸರು ತಿಳಿಸಿದ್ದಾರೆ.

ಜನವರಿ 24ರ ರಾತ್ರಿ, ಮೈ-ಕೈ ನೋವಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ತಾಯಿ ಲಕ್ಷ್ಮಿಗೆ ಮೊದಲು ನಿದ್ರಾಜನಕ ಇಂಜೆಕ್ಷನ್ ನೀಡಲಾಗಿದೆ. ನಂತರ ಕೃಷಿ ಕೆಲಸದಿಂದ ದಣಿದು ಬಂದ ತಂದೆ ದಶರಥ್‌ಗೂ ಅದೇ ಇಂಜೆಕ್ಷನ್ ನೀಡಲಾಗಿದೆ.

ಇಂಜೆಕ್ಷನ್ ನಂತರ ಇಬ್ಬರೂ ಪ್ರಜ್ಞೆ ಕಳೆದುಕೊಂಡಿದ್ದಾರೆ. ಬೆಳಗಿನ ಜಾವ ಅವರು ಎಚ್ಚರವಾಗದಿರುವುದನ್ನು ಗಮನಿಸಿದ ಸುರೇಖಾ, ಸಹೋದರ ಅಶೋಕ್‌ಗೆ ವಿಷಯ ತಿಳಿಸಿದ್ದಾಳೆ.

ಆಸ್ಪತ್ರೆಗೆ ಸಾಗಿಸಿದರೂ ಜೀವ ಉಳಿಯಲಿಲ್ಲ :

ಅಶೋಕ್ ಇಬ್ಬರನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ಕರೆದೊಯ್ದರೂ, ವೈದ್ಯರು ಈಗಾಗಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ. ಆರಂಭದಲ್ಲಿ ಸಾವಿನ ಬಗ್ಗೆ ಅನುಮಾನ ಇಲ್ಲದಂತೆ ಕಂಡರೂ, ಮನೆಯ ಪರಿಶೀಲನೆಯ ವೇಳೆ ಬಳಸಿದ ಸಿರಿಂಜ್‌ಗಳು ಮತ್ತು ಔಷಧಿಗಳು ಪತ್ತೆಯಾಗಿದ್ದು ಪ್ರಕರಣಕ್ಕೆ ತಿರುವು ನೀಡಿತು.

ಮರಣೋತ್ತರ ವರದಿಯಿಂದ ಸತ್ಯ ಬಹಿರಂಗ :

ಮರಣೋತ್ತರ ಪರೀಕ್ಷೆಯಲ್ಲಿ ನಿದ್ರಾಜನಕ ಔಷಧಿ ಮಿತಿಮೀರಿದ ಪ್ರಮಾಣದಲ್ಲಿದ್ದ ಕಾರಣವೇ ಸಾವಿಗೆ ಕಾರಣ ಎಂದು ದೃಢಪಟ್ಟಿದೆ. ಇದರಿಂದ ಅನುಮಾನ ಗಟ್ಟಿಯಾಗಿದ್ದು, ಸುರೇಖಾಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.

ವಿರೋಧಾಭಾಸದ ಹೇಳಿಕೆಗಳ ನಂತರ, ಕೊನೆಗೆ ಸುರೇಖಾ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ನ್ಯಾಯಾಂಗ ಬಂಧನ :

ಸುರೇಖಾಳ ವಿರುದ್ಧ ಹತ್ಯೆ ಪ್ರಕರಣ ದಾಖಲಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ.

ಇದನ್ನು ಓದಿ : Nurse : ರೋಗಿ ಮುಂದೆಯೇ ಬಟ್ಟೆ ಬಿಚ್ಚಿದ ನರ್ಸ್‌ ; ವಿಡಿಯೋ.!

ಕುಟುಂಬ ಹಿನ್ನೆಲೆ :

ಮೃತರಾದ ದಶರಥ್ ಮತ್ತು ಲಕ್ಷ್ಮೀ ಬಂಟ್ವಾರಂ ಮಂಡಲದ ಯಾಚಾರಂ ಗ್ರಾಮದ ರೈತರು. ಇವರಿಗೆ ಇಬ್ಬರು ಪುತ್ರಿಯರು ಮತ್ತು ಒಬ್ಬ ಪುತ್ರ ಇದ್ದು, ಕಿರಿಯ ಪುತ್ರಿ ಸುರೇಖಾ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಳು.

Source : Agences


DISCLAIMER : ಈ ವರದಿಯಲ್ಲಿರುವ ಮಾಹಿತಿ ಪೊಲೀಸ್ ತನಿಖೆ ಹಾಗೂ ಅಧಿಕೃತ ಮೂಲಗಳ ಆಧಾರದ ಮೇಲೆ ನೀಡಲಾಗಿದೆ. ಪ್ರಕರಣವು ನ್ಯಾಯಾಲಯದ ವಿಚಾರಣೆಯಲ್ಲಿದ್ದು, ಆರೋಪಿಗಳು ನ್ಯಾಯಾಲಯದಿಂದ ತಪ್ಪಿತಸ್ಥರೆಂದು ಸಾಬೀತಾಗುವವರೆಗೂ ನಿರಪರಾಧಿಗಳೆಂದು ಪರಿಗಣಿಸಲಾಗುತ್ತದೆ. ಈ ಸುದ್ದಿ ಯಾವುದೇ ವ್ಯಕ್ತಿಯ ಗೌರವಕ್ಕೆ ಧಕ್ಕೆ ಉಂಟುಮಾಡುವ ಉದ್ದೇಶ ಹೊಂದಿಲ್ಲ.

ಅವಧಿ ಮೀರಿದ ಮಾತ್ರೆಗಳನ್ನು ಡಸ್ಟ್‌ಬಿನ್‌ಗೆ ಹಾಕುವ ಮೊದಲು ತಿಳಿಯಲೇಬೇಕಾದ ಮಾಹಿತಿ.

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಅವಧಿ ಮೀರಿದ ಮಾತ್ರೆಗಳು (Expire Medicines) ಎಂದರೆ ತಕ್ಷಣವೇ ಕಸದ ಬುಟ್ಟಿಗೆ ಹಾಕಬೇಕು ಎನ್ನುವ ಮನೋಭಾವನೆ ಬಹುತೇಕ ಎಲ್ಲರಲ್ಲೂ ಇದೆ. ಆದರೆ ನೀವು ತಿಳಿದರೆ ಆಶ್ಚರ್ಯವಾಗುತ್ತದೆ – ಕೆಲವು ಔಷಧಿಗಳನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಅವು ಪರಿಸರ ಸ್ನೇಹಿಯಾಗಿ ಮನೆಯ ಕೆಲಸಗಳಿಗೆ ಬಹಳ ಉಪಯೋಗವಾಗುತ್ತವೆ.

ಖಾಸಗಿಯಾಗಿ ವಿಟಮಿನ್, ಕ್ಯಾಲ್ಸಿಯಂ ಹಾಗೂ ಕೆಲವು ಸಾಮಾನ್ಯ ಮಾತ್ರೆಗಳು ಮನೆ ಸ್ವಚ್ಛತೆ, ತೋಟಗಾರಿಕೆ ಮತ್ತು ದಿನನಿತ್ಯದ ಬಳಕೆಗೆ ಸಹಕಾರಿಯಾಗಬಹುದು. ಆದರೆ ಅವುಗಳನ್ನು ತಿನ್ನಲು ಮಾತ್ರ ಎಂದಿಗೂ ಬಳಸಬಾರದು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಅವಧಿ ಮೀರಿದ ಮಾತ್ರೆಗಳ ಉಪಯೋಗ ತಿಳಿಯೋಣ :

ಇದೀಗ ಅವಧಿ ಮೀರಿದ ಔಷಧಿಗಳನ್ನು ಸುರಕ್ಷಿತವಾಗಿ ಬಳಸುವ ಕೆಲವು ಉಪಯುಕ್ತ ವಿಧಾನಗಳು ಇಲ್ಲಿವೆ 👇

ಸಸ್ಯಗಳ ಆರೈಕೆಗೆ ಉಪಯೋಗ :

ಅವಧಿ ಮೀರಿದ ವಿಟಮಿನ್ ಹಾಗೂ ಕ್ಯಾಲ್ಸಿಯಂ ಮಾತ್ರೆಗಳನ್ನು ಪುಡಿ ಮಾಡಿ ಸಸ್ಯಗಳ ಬೇರು ಭಾಗದಲ್ಲಿ ಹಾಕಿದರೆ ಅದು ಗೊಬ್ಬರದಂತೆ ಕೆಲಸ ಮಾಡುತ್ತದೆ. ಇದರಿಂದ ಸಸ್ಯಗಳ ಬೆಳವಣಿಗೆ ಉತ್ತಮವಾಗುತ್ತದೆ.

👉 ಕೆಲವರು ಪ್ಯಾರಸಿಟಮಾಲ್ ಮಿಶ್ರಿತ ನೀರನ್ನು ಸಸ್ಯಗಳಿಗೆ ಸಿಂಪಡಿಸುವುದು ಕೂಡ ಸಹಾಯಕ ಎಂದು ಹೇಳುತ್ತಾರೆ. ಆದರೆ ಇದನ್ನು ಅತಿಯಾಗಿ ಬಳಸುವುದು ಬೇಡ.

ಬಟ್ಟೆಗಳ ಮೊಂಡುತನದ ಕಲೆ ತೆಗೆಯಲು :

ಆಸ್ಪಿರಿನ್ ಅಥವಾ ಡಿಸ್ಪ್ರಿನ್ ಮಾತ್ರೆಗಳನ್ನು ನೀರಿನಲ್ಲಿ ಕರಗಿಸಿ ಕಲೆ ಇರುವ ಜಾಗಕ್ಕೆ ಹಚ್ಚಿದರೆ,

  • ಬಟ್ಟೆಗಳ ಮೇಲಿನ ಹಳೆಯ ಕಲೆಗಳು ನಿಧಾನವಾಗಿ ಹೋಗುತ್ತವೆ.
  • ಬಾತ್ರೂಮ್ ಟೈಲ್‌ಗಳು ಹಾಗೂ ಸಿಂಕ್‌ಗಳ ಮೇಲಿನ ಗ್ರೀಸ್ ಕೂಡ ಸುಲಭವಾಗಿ ಹೋಗುತ್ತದೆ.

ನಂಜು ಮತ್ತು ಕೀಟ ನಿಯಂತ್ರಣಕ್ಕೆ :

ಅವಧಿ ಮೀರಿದ ನಂಜುನಿರೋಧಕ ಕ್ರೀಮ್ ಅಥವಾ ಸ್ಪ್ರೇಗಳನ್ನು ಇರುವೆಗಳು ಹೆಚ್ಚಿರುವ ಜಾಗಗಳಲ್ಲಿ ಬಳಸಿ ಅವುಗಳನ್ನು ದೂರ ಮಾಡಬಹುದು.

👉 ಸಿಂಕ್ ಅಥವಾ ಡ್ರೇನ್ ಬಳಿ ಕ್ಯಾಪ್ಸುಲ್‌ಗಳನ್ನು ಇಟ್ಟರೆ ಬ್ಯಾಕ್ಟೀರಿಯಾ ವೃದ್ಧಿ ಕಡಿಮೆಯಾಗಲು ಸಹಾಯ ಮಾಡುತ್ತದೆ.

ಶೂಗಳು ಹೊಳೆಯಲು :

  • ವಿಟಮಿನ್ E ಕ್ಯಾಪ್ಸುಲ್‌ನಲ್ಲಿರುವ ಎಣ್ಣೆಯನ್ನು ಹಳೆಯ ಶೂಗಳ ಮೇಲೆ ಉಜ್ಜಿದರೆ, ಶೂಗಳು ಹೊಸದಂತೆ ಮಿಂಚುತ್ತವೆ.

ತುಕ್ಕು ತೆಗೆಯಲು :

ಹಳೆಯ ಸಿರಪ್‌ಗಳನ್ನು ಕಬ್ಬಿಣದ ವಸ್ತುಗಳ ಮೇಲೆ ಹಚ್ಚಿ ಸ್ವಲ್ಪ ಸಮಯ ಬಿಟ್ಟರೆ,

  • ತುಕ್ಕು ನಿಧಾನವಾಗಿ ಸಡಿಲವಾಗಿ ಹೋಗುತ್ತದೆ.
  • ನಂತರ ಬಟ್ಟೆಯಿಂದ ಒರೆಸಿದರೆ ವಸ್ತು ಸ್ವಚ್ಛವಾಗುತ್ತದೆ.

ಇದನ್ನು ಓದಿ : ಮಾತ್ರೆ ತೆಗೆದುಕೊಂಡ ನಂತರ ಖಂಡಿತ ಈ ತಪ್ಪುಗಳನ್ನು ಮಾಡಬೇಡಿ ; ಮಾಡಿದರೆ ಜೀವಕ್ಕೆ ಅಪಾಯ.!

ಪ್ರಮುಖ ಎಚ್ಚರಿಕೆ :

  • ಅವಧಿ ಮೀರಿದ ಔಷಧಿಗಳನ್ನು ಸೇವಿಸುವುದು ಅಪಾಯಕಾರಿ.
  • ಬಳಕೆ ಮಾಡುವ ಮೊದಲು ದಿನಾಂಕ ಮತ್ತು ಔಷಧಿಯ ಸ್ವಭಾವವನ್ನು ಪರಿಶೀಲಿಸಬೇಕು.
  • ಮಕ್ಕಳ ಕೈಗೆ ಸಿಗದಂತೆ ಇಡಬೇಕು.

ಔಷಧಿಗಳನ್ನು ನೇರವಾಗಿ ಕಸಕ್ಕೆ ಎಸೆಯುವ ಬದಲು, ಮೇಲಿನಂತೆ ಜವಾಬ್ದಾರಿಯುತವಾಗಿ ಬಳಸಿದರೆ ಪರಿಸರ ರಕ್ಷಣೆಗೂ ಸಹಾಯವಾಗುತ್ತದೆ ಹಾಗೂ ಮನೆ ಕೆಲಸಗಳೂ ಸುಲಭವಾಗುತ್ತವೆ.


Disclaimer : ಈ ಲೇಖನದಲ್ಲಿ ನೀಡಿರುವ ಮಾಹಿತಿ ಸಾಮಾನ್ಯ ಮಾಹಿತಿ ಉದ್ದೇಶಕ್ಕಾಗಿ ಮಾತ್ರವಾಗಿದೆ. ಅವಧಿ ಮೀರಿದ ಯಾವುದೇ ಔಷಧಿಗಳನ್ನು ಸೇವಿಸುವುದು ಆರೋಗ್ಯಕ್ಕೆ ಅಪಾಯಕಾರಿ. ಇಲ್ಲಿ ಹೇಳಿರುವ ಉಪಯೋಗಗಳು ವೈದ್ಯಕೀಯ ಚಿಕಿತ್ಸೆಗಾಗಿ ಅಲ್ಲ. ಔಷಧಿಗಳನ್ನು ಬಳಸುವ ಮೊದಲು ವೈದ್ಯರು ಅಥವಾ ತಜ್ಞರ ಸಲಹೆ ಪಡೆಯುವುದು ಅಗತ್ಯ. ಲೇಖನದಲ್ಲಿನ ಮಾಹಿತಿ ಆಧರಿಸಿ ಉಂಟಾಗುವ ಯಾವುದೇ ಪರಿಣಾಮಗಳಿಗೆ ವೆಬ್‌ಸೈಟ್ ಅಥವಾ ಲೇಖಕರು ಹೊಣೆಗಾರರಾಗಿರುವುದಿಲ್ಲ.

ಸಂಗಾತಿಯೊಂದಿಗೆ ರೂಮ್ ಬುಕ್ ಮಾಡುವ ಮುನ್ನ ಈ ಸುರಕ್ಷತಾ ಸೂಚನೆಗಳನ್ನು ತಿಳಿದುಕೊಳ್ಳಿ.

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಹನಿಮೂನ್, ಟ್ರಿಪ್ ಅಥವಾ ದೇಶ-ವಿದೇಶ ಪ್ರವಾಸ ಮಾಡುವಾಗ ನವ ವಿವಾಹಿತರು ಮತ್ತು ಪ್ರೇಮಿಗಳು ಹೋಟೆಲ್‌ಗಳು ಅಥವಾ ಲಾಡ್ಜ್‌ಗಳನ್ನು ಆಯ್ಕೆ ಮಾಡುತ್ತಾರೆ. ಇದರಿಂದ ಅವರಿಗೆ ತಮ್ಮದೇ ಆದ ಗೌಪ್ಯತೆ ಮತ್ತು ಶಾಂತಿಗೆ ಅವಕಾಶ ದೊರೆಯುತ್ತದೆ. ಆದರೆ, ರೂಮ್ ಬುಕ್ ಮಾಡುವಾಗ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದಿದ್ದರೆ ಭವಿಷ್ಯದಲ್ಲಿ ದೊಡ್ಡ ಸಮಸ್ಯೆಗೆ ಸಿಕ್ಕಿಹಾಕಿಕೊಳ್ಳಬಹುದು.

1. ಹೋಟೆಲ್ ರಿವ್ಯೂ ಮತ್ತು ಖ್ಯಾತಿ ಪರಿಶೀಲನೆ:

ರೂಮ್ ಬುಕ್ ಮಾಡುವ ಮೊದಲು ಆ ಹೋಟೆಲ್‌ನ ರಿವ್ಯೂಗಳನ್ನು ಪರಿಶೀಲಿಸಿ. ಗ್ರಾಹಕರ ವಿಮರ್ಶೆಗಳು ಹೋಟೆಲ್‌ನ ಶುದ್ಧತೆ, ಸುರಕ್ಷತೆ ಮತ್ತು ಗೌಪ್ಯತೆ ಬಗ್ಗೆ ಸ್ಪಷ್ಟ ಮಾಹಿತಿ ನೀಡುತ್ತವೆ.

2. ಕೋಣೆ ಪ್ರವೇಶಿಸಿದಾಗ ತಕ್ಷಣವೇ ಪರಿಶೀಲನೆ:

ಕೋಣೆಗೆ ಹೋದಾಗ ಮೊದಲೇ ಎಲ್ಲ ದೀಪಗಳನ್ನು ಆಫ್ ಮಾಡಿ, ಕಿಟಕಿ ಮತ್ತು ಪರದೆಗಳನ್ನು ಸಂಪೂರ್ಣವಾಗಿ ಮುಚ್ಚಿ. ಮೊಬೈಲ್ ಕ್ಯಾಮೆರಾ ಅಥವಾ ಟಾರ್ಚ್ ಆನ್ ಮಾಡಿ ಕೋಣೆಯನ್ನು ಸುತ್ತಲೂ ಪರಿಶೀಲಿಸಿ. ಹೆಚ್ಚಿನ ಗುಪ್ತ ಕ್ಯಾಮೆರಾಗಳು ಕತ್ತಲೆಯಲ್ಲಿ ಕೆಂಪು ಅಥವಾ ಬೆಳಕಿಗೆ ಪ್ರತಿಬಿಂಬವಾಗುವಂತೆ ಗೋಚರಿಸುತ್ತವೆ. ಟಿವಿ ರಿಮೋಟ್ ಬಟನ್ ಒತ್ತುವ ಮೂಲಕ ಕೆಲವು ಲೆನ್ಸ್‌ಗಳನ್ನು ಪತ್ತೆ ಮಾಡಬಹುದು.

3. ಕ್ಯಾಮೆರಾ ಪತ್ತೆ ಮಾಡಲು ಉಪಾಯಗಳು:

  • ಮೊಬೈಲ್ ಫೋನ್ ಟಾರ್ಚ್ ಅಥವಾ ಲೈಟ್ ಬಳಸಿಕೊಂಡು ಕೋಣೆಯ ಮೂಲೆಗಳನ್ನು ಸಂಪೂರ್ಣವಾಗಿ ಪರಿಶೀಲಿಸಿ.
  • ಗಾಜು ಅಥವಾ ಇತರ ಹೊಳೆಯುವ ವಸ್ತುಗಳಲ್ಲಿ ನೀಲಿ ಅಥವಾ ನೇರಳೆ ಪ್ರತಿಬಿಂಬ ಕಾಣಿಸಿದರೆ, ಅದು ಕ್ಯಾಮೆರಾ ಲೆನ್ಸ್ ಆಗಿರಬಹುದು.
  • ವಿಶೇಷವಾಗಿ ಪೀಠೋಪಕರಣಗಳು, ಟೇವಲ್, ಲ್ಯಾಂಪ್ ಅಥವಾ ಟಿವಿ ಪಕ್ಕದ ಕೋಣೆಗಳಲ್ಲಿ ಜಾಗರೂಕತೆ ಇರಲಿ.

4. ಇತರ ಸಾಮಾನ್ಯ ಸುರಕ್ಷತಾ ಕ್ರಮಗಳು:

  • ಹಲವಾರು ರಹಸ್ಯ ಕ್ಯಾಮೆರಾಗಳು ವೈ-ಫೈ ಮೂಲಕ ಕಾರ್ಯನಿರ್ವಹಿಸುತ್ತವೆ. “Fing” ಅಪ್ಲಿಕೇಶನ್ ಅಥವಾ ಇತರ ನೆಟ್‌ವರ್ಕ್ ಸ್ಕ್ಯಾನಿಂಗ್ ಟೂಲ್ ಬಳಸಿ ಕೋಣೆಯಲ್ಲಿನ ಸಕ್ರಿಯ ಡಿವೈಸ್‌ಗಳನ್ನು ಪರಿಶೀಲಿಸಿ.

  • ಅನುಮಾನಾಸ್ಪದ ವಸ್ತುಗಳು, ಉದಾಹರಣೆಗೆ ಹೊಗೆ ಪತ್ತೆಗಾರ, ಅಲಾರ್ಮ್ ಗಡಿಯಾರ, ಟೆಡ್ಡಿ ಬೇರ್ ಅಥವಾ ಪವರ್ ಸಾಕೆಟ್‌ಗಳನ್ನು ಪರಿಶೀಲಿಸಿ.

5. RF ಡಿಟೆಕ್ಟರ್‌ಗಳು ಮತ್ತು ಲೆನ್ಸ್ ಡಿಟೆಕ್ಟರ್‌ಗಳ ಬಳಕೆ:

ಅನಧಿಕೃತ ಕ್ಯಾಮೆರಾ ಅಥವಾ ಮೈಕ್ರೋಫೋನ್ ಶಂಕೆಯಾಗಿದ್ದಲ್ಲಿ ಆನ್‌ಲೈನ್‌ನಲ್ಲಿ ಲಭ್ಯವಿರುವ RF ಡಿಟೆಕ್ಟರ್‌ ಅಥವಾ ಲೆನ್ಸ್ ಡಿಟೆಕ್ಟರ್‌ಗಳನ್ನು ಖರೀದಿಸಿ. ಈ ಸಾಧನಗಳು ರೇಡಿಯೋ ಆವರ್ತನೆಯನ್ನು ಪತ್ತೆ ಮಾಡುತ್ತವೆ ಮತ್ತು ನಿಮ್ಮ ಸುರಕ್ಷತೆಗೆ ಸಹಾಯಕವಾಗುತ್ತವೆ.

6. ಹೋಟೆಲ್ ಉಚಿತ ವೈ-ಫೈ ಬಗ್ಗೆ ಎಚ್ಚರಿಕೆ:

ಹೋಟೆಲ್‌ನಲ್ಲಿ ಉಚಿತ ವೈ-ಫೈ ಬಳಸುವ ಮೊದಲು ಸುರಕ್ಷತೆ ಖಚಿತಪಡಿಸಿಕೊಳ್ಳಿ. ಅಗತ್ಯವಿಲ್ಲದಿದ್ದರೆ ಹೋಟೆಲ್ ವೈ-ಫೈ ಬಳಕೆ ಮಾಡದಿರುವುದು ಉತ್ತಮ. ಅನಧಿಕೃತ ಬಳಕೆದಾರರು ನಿಮ್ಮ ಡಿವೈಸ್‌ನಲ್ಲಿ ಡೇಟಾ ಹ್ಯಾಕ್ ಮಾಡುವ ಸಾಧ್ಯತೆ ಇರುತ್ತದೆ.

ಇದನ್ನು ಓದಿ : ಓಯೋ ರೂಂನಲ್ಲಿ ಸ್ನೇಹಿತೆಯ ಜೊತೆ ಲವರ್‌ನನ್ನು ಕಂಡ ಗೃಹಿಣಿ ; ಮುಂದೆ ನಡೆದದ್ದು ಬೆಚ್ಚಿಬೀಳಿಸುವಂತಿತ್ತು.!


ಸಾರಾಂಶ: ಹನಿಮೂನ್ ಅಥವಾ ಟ್ರಿಪ್ ವೇಳೆ ಹೋಟೆಲ್ ಲಾಜ್ ಬುಕ್ ಮಾಡುವಾಗ ಈ ಸುಲಭ ಆದರೆ ಮಹತ್ವಪೂರ್ಣ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು. ಕೋಣೆ, ಡಿವೈಸ್, ಮತ್ತು ವೈ-ಫೈ ಸುರಕ್ಷತೆ ಬಗ್ಗೆ ಎಚ್ಚರಿಕೆ ವಹಿಸುವುದರಿಂದ ನಿಮ್ಮ ಗೌಪ್ಯತೆ ಮತ್ತು ಭದ್ರತೆಯನ್ನು ತಡೆಯಬಹುದು.

ಬೆಳಗಾವಿ : ವೇಲ್‌ನಿಂದ ಕಟ್ಟಿಕೊಂಡು ಮಲಪ್ರಭಾ ನದಿಗೆ ಹಾರಿದ ಪ್ರೇಮಿಗಳು.

0

ಜನಸ್ಪಂದನ ನ್ಯೂಸ್‌, ಬೆಳಗಾವಿ : ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮಲ್ಲಾಪೂರ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆಯೊಂದು ಇಂದು ಬೆಳಗಿನ ಜಾವ ಸಂಭವಿಸಿದ್ದು, ಯುವ ಜೋಡಿಯೊಂದು ತಮ್ಮ ಜೀವನಕ್ಕೆ ತೆರೆ ಎಳೆದಿದ್ದಾರೆ. ಗ್ರಾಮದ ಬಳಿಯೇ ಹರಿಯುವ ಮಲಪ್ರಭಾ ನದಿಯಲ್ಲಿ ಜೋಡಿ ಮೃತದೇಹಗಳು ಪತ್ತೆಯಾಗಿದ್ದು, ಇಡೀ ಗ್ರಾಮದಲ್ಲಿ ಶೋಕದ ವಾತಾವರಣ ಆವರಿಸಿದೆ.

ನದಿಗೆ ಹಾರಿದ ಪ್ರೇಮಿಗಳು :

ಮೃತರನ್ನು ಜಗದೀಶ (27) ಹಾಗೂ ಗಂಗಮ್ಮಾ(26) ಎಂದು ಗುರುತಿಸಲಾಗಿದೆ. ಇಬ್ಬರೂ ಮಲ್ಲಾಪೂರ ಗ್ರಾಮದ ನಿವಾಸಿಗಳಾಗಿದ್ದು, ಪರಸ್ಪರ ಪರಿಚಯ ಮತ್ತು ಪ್ರೀತಿ ಸಂಬಂಧ ಹೊಂದಿದ್ದರೆಂದು ತಿಳಿದುಬಂದಿದೆ.

ಸ್ಥಳೀಯರ ಮಾಹಿತಿ – ಪೊಲೀಸರ ಪರಿಶೀಲನೆ :

ಇಂದು ಬೆಳಗಿನ ಜಾವ ಮಲಪ್ರಭಾ ನದಿಯ ದಡದಲ್ಲಿ ಇಬ್ಬರ ಶವಗಳು ತೇಲುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ತಕ್ಷಣವೇ ರಾಮದುರ್ಗ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ನಂತರ ಶವಗಳನ್ನು ನದಿಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಬೆಳಗಾವಿ : ವೇಲ್‌ನಿಂದ ಕಟ್ಟಿಕೊಂಡು ಮಲಪ್ರಭಾ ನದಿಗೆ ಹಾರಿದ ಪ್ರೇಮಿಗಳು.

ತನಿಖೆ ಆರಂಭ – ಕಾರಣ ನಿಗೂಢ :

ಈ ಘಟನೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಕುಟುಂಬಸ್ಥರ ವಿರೋಧವಿತ್ತೇ? ವೈಯಕ್ತಿಕ ಸಮಸ್ಯೆಗಳಿದ್ದವೇ? ಅಥವಾ ಬೇರೆ ಯಾವುದೇ ಕಾರಣ ಇದೆಯೇ? ಎಂಬ ಎಲ್ಲ ಅಂಶಗಳ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮೃತರ ಕುಟುಂಬಸ್ಥರನ್ನು ವಿಚಾರಣೆ ಮಾಡಲಾಗುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ.

ಇದನ್ನು ಓದಿ : ಪ್ರೇಮಿಗಳಿಬ್ಬರು ನೇಣಿಗೆ ಶರಣು.!

ಗ್ರಾಮದಲ್ಲಿ ಮೌನದ ವಾತಾವರಣ :

ಇನ್ನೂ ಬದುಕು ಆರಂಭಿಸಬೇಕಿದ್ದ ಯುವಕ-ಯುವತಿ ಹೀಗೆ ಅಕಾಲಿಕವಾಗಿ ಸಾವನ್ನಪ್ಪಿರುವುದು ಗ್ರಾಮಸ್ಥರಲ್ಲಿ ಆಘಾತ ಮೂಡಿಸಿದೆ. ಘಟನೆಯ ಸುದ್ದಿ ತಿಳಿದಂತೆ ಮಲ್ಲಾಪೂರ ಗ್ರಾಮದಲ್ಲಿ ಮೌನ ಆವರಿಸಿದೆ.

Courtesy : Suvarna News


Disclaimer : ಈ ಸುದ್ದಿ ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಪ್ರಕಟಿಸಲಾಗಿದ್ದು, ಯಾವುದೇ ರೀತಿಯ ಆತ್ಮಹತ್ಯೆ ಅಥವಾ ಹಿಂಸಾತ್ಮಕ ಕೃತ್ಯಗಳಿಗೆ ಪ್ರೋತ್ಸಾಹಿಸುವುದಿಲ್ಲ. ಮಾನಸಿಕ ಒತ್ತಡ ಅನುಭವಿಸುತ್ತಿರುವವರು ತಜ್ಞರ ನೆರವು ಪಡೆಯಲು ವಿನಂತಿ.

ಮದುವೆಗೆ ನಿರಾಕರಣೆ: ಪ್ರಿಯತಮೆ ತಲೆ ಕತ್ತರಿಸಿ ಯಮುನಾ ನದಿಗೆ ಎಸೆದ ಪ್ರಿಯಕರ.

0

ಜನಸ್ಪಂದನ ನ್ಯೂಸ್‌, ಆಗ್ರಾ : ಉತ್ತರ ಪ್ರದೇಶದ ಆಗ್ರಾದಲ್ಲಿ ಜನರಿಗೆ ಶಾಕ್ ನೀಡುವಂತಹ ಹತ್ಯೆಯ ಪ್ರಕರಣ ನಡೆದಿದೆ. 30 ವರ್ಷದ ವಿನಯ್ ಸಿಂಗ್, ತಮ್ಮ ಸಹೋದ್ಯೋಗಿ 32 ವರ್ಷದ ಮಿಂಕಿ ಶರ್ಮಾ ಅವರನ್ನು ಕೊಂದು, ಅವರ ತಲೆಯನ್ನು ಕಡಿದು, ದೇಹದ ಭಾಗಗಳನ್ನು ಗೋಣಿ ಚೀಲದಲ್ಲಿ ತುಂಬಿ ಯಮುನಾ ನದಿಗೆ ಎಸೆದಿರುವುದು ಪ್ರಕರಣದಲ್ಲಿ ದೃಢಪಟ್ಟಿದೆ.

ಮಿಂಕಿ ಶರ್ಮಾ ಸ್ಥಳೀಯ ಖಾಸಗಿ ಕಂಪನಿಯಲ್ಲಿ HR ಮ್ಯಾನೇಜರ್‍ ಆಗಿ ಕೆಲಸ ಮಾಡುತ್ತಿದ್ದಳು. ಆರೋಪಿ ವಿನಯ್ ಸಿಂಗ್ ಸಹ ಆ ಕಂಪನಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ. ಪೊಲೀಸರು ವರದಿ ಪ್ರಕಾರ, ಮಿಂಕಿ ಶರ್ಮಾ ಮದುವೆ ಪ್ರಸ್ತಾವವನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ವಿನಯ್ ಆಕೆಯನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಪ್ರಿಯತಮೆ ತಲೆ ಕತ್ತರಿಸಿ ಯಮುನಾ ನದಿಗೆ ಎಸೆದ ಪ್ರಿಯಕರ :

Courtesy : Social Media (Twitter) 

ಪೊಲೀಸರ ಮಾಹಿತಿಯ ಪ್ರಕಾರ, ಕೊಲೆ ನಂತರ ದೇಹವನ್ನು ತುಂಡುಮಾಡಿ, ಗೋಣಿ ಚೀಲದಲ್ಲಿ ತುಂಬಿ ಜವಾಹರ್ ಸೇತುವೆಯ ಬಳಿಯಲ್ಲಿ ಯಮುನಾ ನದಿಗೆ ಎಸೆದಿದ್ದಾನೆ.

ಜನವರಿ 24 ರಂದು ಬೆಳಗಿನ ವೇಳೆ ಜವಾಹರ್ ಸೇತುವೆಯ ಮೇಲೆ ಗೋಣಿ ಚೀಲದಲ್ಲಿದ್ದ ತಲೆ ಇಲ್ಲದ ಶವವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ನಂತರ ಮೃತವನ್ನು ಮಿಂಕಿ ಶರ್ಮಾ ಎಂದು ಗುರುತಿಸಲಾಗಿದೆ.

ಪೊಲೀಸರು ಹೇಳಿದರು, ವಿನಯ್ ಸಿಂಗ್ ಮತ್ತು ಮಿಂಕಿ ಶರ್ಮಾ ಎರಡು ವರ್ಷಗಳಿಗೂ ಹೆಚ್ಚು ಕಾಲ ಸಂಬಂಧದಲ್ಲಿದ್ದರು. ಆದರೆ ಮಿಂಕಿ ಶರ್ಮಾ ಇತ್ತೀಚೆಗೆ ಮತ್ತೊಬ್ಬ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಈ ಕಾರಣದಿಂದಾಗಿ ಜಗಳಗಳು ಹೆಚ್ಚಾಗಿದ್ದು, ಕೊನೆಗೆ ಹತ್ಯೆ ಮೂಲಕ ಕೊನೆಗೊಂಡಿದೆ.

ಈ ಕ್ರೈಂ ಸುದ್ದಿ ಓದಿ : ಅನೈತಿಕ ಸಂಬಂಧ : ಡ್ರಮ್‌ನಲ್ಲಿ ಶವ ಪತ್ತೆ ; ಪತ್ನಿ–ಪ್ರಿಯಕರರಿಂದ ಭೀಕರ ಕೊಲೆ.

ಜನವರಿ 23 ರಂದು ಮಧ್ಯಾಹ್ನ 2 ಗಂಟೆಗೆ ಮಿಂಕಿ ಮನೆಯವರಿಗೆ ಕಚೇರಿಗೆ ಹೋಗುತ್ತಿದ್ದಳು ಎಂದು ತಿಳಿಸಿದ್ದು, ಆದರೆ ಫೋನ್ ಸ್ವಿಚ್ ಆಫ್ ಆಗಿದ್ದರಿಂದ ಮನೆತನ ಆತಂಕಗೊಂಡಿತು. ಮಿಂಕಿಯ ಕುಟುಂಬವು ಎಲ್ಲಾ ಕಡೆ ಹುಡುಕಿದರೂ ಯಾವುದೇ ಸುಳಿವು ಸಿಕ್ಕದಿರುವುದರಿಂದ, ಟ್ರಾನ್ಸ್ ಯಮುನಾ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದರು.

ಪೊಲೀಸರು ಐದು ತಂಡಗಳನ್ನು ರಚಿಸಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಪರಿಶೀಲನೆಯ ವೇಳೆ, ವ್ಯಕ್ತಿಯೊಬ್ಬ ಗೋಣಿ ಚೀಲವನ್ನು ಸ್ಕೂಟರ್‌ನಲ್ಲಿ ಜವಾಹರ್ ಸೇತುವೆಗೆ ಕರೆದೊಯ್ಯುತ್ತಿರುವ ದೃಶ್ಯವನು ಕಂಡುಹಿಡಿದಿದ್ದಾರೆ. ತನಿಖೆ ಆಧಾರದ ಮೇಲೆ ಆರೋಪಿ ವಿನಯ್ ಸಿಂಗ್ ಎಂದು ಗುರುತಿಸಲಾಯಿತು.

ಅದರ ನಂತರ ಆತನ ಬಂಧನ ಮಾಡಲಾಗಿದ್ದು, ಆತ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಪ್ರಕರಣ ಸಂಬಂಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 103(1) ಮತ್ತು 238 ರ ಅಡಿಯಲ್ಲಿ FIR ದಾಖಲಾಗಿದ್ದು, ಆರೋಪಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ಇದನ್ನು ಓದಿ : ಅನೈತಿಕ ಸಂಬಂಧ : ಡ್ರಮ್‌ನಲ್ಲಿ ಶವ ಪತ್ತೆ ; ಪತ್ನಿ–ಪ್ರಿಯಕರರಿಂದ ಭೀಕರ ಕೊಲೆ.

ಪೊಲೀಸರ ವಶದಲ್ಲಿ ಸ್ಕೂಟರ್, ಚಾಕು ಮತ್ತು ದೇಹದ ಭಾಗಗಳಿಗೆ ಸಂಬಂಧಿಸಿದ ಬಟ್ಟೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಘಟನೆ ಆಗ್ರಾದ ಜನರಲ್ಲಿ ಭಯ ಮತ್ತು ಆತಂಕ ಉಂಟುಮಾಡಿದ್ದು, ಪೊಲೀಸರು ಪ್ರಕರಣದ ಸಂಪೂರ್ಣ ತನಿಖೆಯನ್ನು ಮುಂದುವರೆಸುತ್ತಿದ್ದಾರೆ.


Disclaimer: ಈ ವರದಿಯಲ್ಲಿ ಉಲ್ಲೇಖಿಸಲಾದ ಮಾಹಿತಿ ಅಧಿಕೃತ ಪೊಲೀಸ್ ಮೂಲಗಳು ಮತ್ತು ಮಾಧ್ಯಮ ವರದಿಗಳ ಆಧಾರದ ಮೇಲೆ ನೀಡಲಾಗಿದೆ. ಘಟನೆಗೆ ಸಂಬಂಧಿಸಿದ ತನಿಖೆ ಇನ್ನೂ ಮುಂದುವರಿದಿದ್ದು, ಯಾವುದೇ ವ್ಯಕ್ತಿಯ ವಿರುದ್ಧ ಅಂತಿಮ ತೀರ್ಪು ನ್ಯಾಯಾಲಯದಿಂದಲೇ ಬರಬೇಕಾಗಿರುತ್ತದೆ. ಈ ಸುದ್ದಿ ಸಾರ್ವಜನಿಕ ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಪ್ರಕಟಿಸಲಾಗಿದೆ.

ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಅಪಘಾತ ; 6 ಜನರ ಸಾವಿನ ಶಂಕೆ.

0

ಜನಸ್ಪಂದನ ನ್ಯೂಸ್, ಬಾರಾಮತಿ: ಮಹಾರಾಷ್ಟ್ರದ ಬಾರಾಮತಿ ಸಮೀಪ ಇಂದು ಬೆಳಿಗ್ಗೆ ಸಣ್ಣ ವಿಮಾನವೊಂದು ಅಪಘಾತಕ್ಕೀಡಾದ ಘಟನೆ ರಾಜ್ಯಾದ್ಯಂತ ಆತಂಕ ಮೂಡಿಸಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ವಿಮಾನದಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು, ಅಪಘಾತದಲ್ಲಿ ಆರು ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಮುಂಬೈನಿಂದ ಬಾರಾಮತಿಗೆ ಆಗಮಿಸುತ್ತಿದ್ದ ಸಣ್ಣ ವಿಮಾನವು ಲ್ಯಾಂಡಿಂಗ್ ವೇಳೆ ತಾಂತ್ರಿಕ ದೋಷದಿಂದ ನಿಯಂತ್ರಣ ತಪ್ಪಿ, ವಿಮಾನ ನಿಲ್ದಾಣದ ಸಮೀಪದ ಹೊಲ ಪ್ರದೇಶದಲ್ಲಿ ಪತನಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಅಪಘಾತದ ನಂತರ ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿಕೊಂಡಿದ್ದು, ವಿಮಾನ ಸಂಪೂರ್ಣವಾಗಿ ಹಾನಿಗೊಳಗಾಗಿದೆ.

ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಅಪಘಾತ :

ರಕ್ಷಣಾ ಕಾರ್ಯಾಚರಣೆ ತ್ವರಿತ :

ಘಟನೆಗೆ ತಕ್ಷಣ ಸ್ಪಂದಿಸಿದ ಸ್ಥಳೀಯ ಆಡಳಿತ ಹಾಗೂ ಅಗ್ನಿಶಾಮಕ ದಳ ರಕ್ಷಣಾ ಕಾರ್ಯಾಚರಣೆ ಆರಂಭಿಸಿತು. ಅಪಘಾತದಲ್ಲಿ ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದ್ದು, 6 ಮಂದಿ ಮೃತಪಟ್ಟಿರುವ ಸಾಧ್ಯತೆ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಅಜಿತ್ ಪವಾರ್ ಕುರಿತು ಗೊಂದಲ :

ಅಪಘಾತದ ಸುದ್ದಿ ಹೊರಬರುತ್ತಿದ್ದಂತೆ ಅಜಿತ್ ಪವಾರ್ ಅವರ ಆರೋಗ್ಯದ ಬಗ್ಗೆ ಆತಂಕ ವ್ಯಕ್ತವಾಯಿತು. ಆದರೆ, ಅವರ ಆಪ್ತ ಮೂಲಗಳಿಂದ ಇನ್ನೂ ಅಧಿಕೃತ ದೃಢೀಕರಣ ಬಂದಿಲ್ಲ. ಕೆಲ ಮೂಲಗಳು ಅವರು ವಿಮಾನದಲ್ಲಿದ್ದರು ಎಂದು ಹೇಳಿದ್ದರೆ, ಮತ್ತೊಂದು ಮೂಲಗಳು ಅವರು ಬೇರೆ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದರು ಎಂದು ತಿಳಿಸಿವೆ. ಈ ಕುರಿತು ಸ್ಪಷ್ಟ ಮಾಹಿತಿ ನಿರೀಕ್ಷಿಸಲಾಗಿದೆ.

ಡಿಜಿಸಿಎ ತನಿಖೆ ಸಾಧ್ಯತೆ :

ವಿಮಾನ ಅಪಘಾತದ ನಿಖರ ಕಾರಣ ತಿಳಿದುಬಂದಿಲ್ಲ. ತಾಂತ್ರಿಕ ದೋಷ, ಹವಾಮಾನ ಅಥವಾ ಲ್ಯಾಂಡಿಂಗ್ ಸಮಯದ ತಪ್ಪು ಎಂಬ ಎಲ್ಲಾ ಅಂಶಗಳ ಕುರಿತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ತನಿಖೆ ನಡೆಸುವ ಸಾಧ್ಯತೆ ಇದೆ.

ಇದನ್ನು ಓದಿ : Takeoff ಹಂತದಲ್ಲಿಯೇ ವಿಮಾನ ನೆಲಕ್ಕೆ : ಇಬ್ಬರು ಸಾವು ; ವಿಡಿಯೋ ವೈರಲ್.!

ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ :

ಘಟನೆ ಹೊರಬರುತ್ತಿದ್ದಂತೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ಆರಂಭವಾಗಿದೆ. ಬಾರಾಮತಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಕಾರ್ಯಕರ್ತರು ಮತ್ತು ಅಧಿಕಾರಿಗಳು ವಿಮಾನ ನಿಲ್ದಾಣದತ್ತ ಧಾವಿಸಿದ್ದಾರೆ.


Disclaimer : ಈ ಸುದ್ದಿ ಪ್ರಾಥಮಿಕ ವರದಿಗಳ ಆಧಾರದಲ್ಲಿ ಪ್ರಕಟಿಸಲಾಗಿದ್ದು, ಅಧಿಕೃತ ಮಾಹಿತಿ ಲಭ್ಯವಾದ ನಂತರ ವಿವರಗಳಲ್ಲಿ ಬದಲಾವಣೆ ಸಂಭವಿಸಬಹುದು. ಯಾವುದೇ ಊಹಾಪೋಹ ಅಥವಾ ದೃಢೀಕರಣವಿಲ್ಲದ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಸೇರಿಸಲಾಗಿಲ್ಲ.